ಪ್ರೋಟೋಜೋವ

ಪ್ರಾಣಿ ರಾಜ್ಯದ ಎರಡು ಮುಖ್ಯ ಉಪರಾಜ್ಯಗಳಲ್ಲಿ ಮೊದಲನೆಯದು ಹಾಗೂ ಇದಕ್ಕೆ ಸೇರಿದ ವಿಭಾಗ. ಪ್ರಾಣಿಗಳ ರಾಜ್ಯದ ಒಟ್ಟು 23 ವಿಭಾಗಗಳ ಪೈಕಿ ಇದು ವಿಶಿಷ್ಟವಾದ್ದು. ಏಕೆಂದರೆ ಇದಕ್ಕೆ ಸೇರಿದ ಪ್ರಾಣಿಗಳ ಏಕಕೋಶಜೀವಿಗಳು (ಉಳಿದವುಗಳ ಸದಸ್ಯಗಳಾದರೂ ಬಹು ಕೋಶ ಜೀವಿಗಳು. ಇಂಥ ಜೀವಿಗಳಿಗೆ ಮೆಟeóÉೂೀವ ಎಂದು ಹೆಸರು). ಹೀಗಾಗಿ ಪ್ರೋಟೋeóÉೂೀವ ಇಡೀ ಪ್ರಾಣಿ ಪ್ರಪಂಚದಲ್ಲಿ ಅತ್ಯಂತ ಕಡಿಮೆ ವಿಕಾಸ ಹೊಂದಿದ ಪ್ರಾಣಿಗಳ ಗುಂಪು ಎನಿಸಿಕೊಂಡಿದ್ದ ವಿಕಾಸದ ಆದಿಯ ಪ್ರಾಣಿಗಳನ್ನು ಸೂಚಿಸುತ್ತದೆ. ಆದ್ದರಿಂದಲೇ ಈ ಗುಂಪಿಗೆ ಪ್ರೋಟೋeóÉೂೀವ ಎಂದು ಹೆಸರು. ಈ ಹೆಸರು ಗ್ರೀಕ್ ಭಾಷೆಯ ಪದಗಳಾದ ಪ್ರೋಟೋಸ್=ಪ್ರಥಮ, ಜೂವಾನ್=ಪ್ರಾಣಿ ಎಂಬವುಗಳಿಂದ ನಿಷ್ಪತ್ತಿ ಗೊಂಡಿದೆ. ಈ ಗುಂಪಿನ ಸದಸ್ಯಗಳ ದೇಹ ಒಂದೇ ಒಂದು ಜೀವಕೋಶದಿಂದ ರಚಿತವಾಗಿದೆಯಾದರೂ ಬೇರೆ ಯಾವುದೇ ಬಹುಕೋಶ ಜೀವಿಯಲ್ಲೂ ಕಾಣಬಹುದಾದ ಜೀವ ಚಟುವಟಿಕೆಗಳಾದ ಚಲನೆ, ಆಹಾರ ಸೇವನೆ, ರಕ್ಷಣೆ, ಸಂತಾನೋತ್ಪತ್ತಿ, ಬೆಳವಣಿಗೆ ಮುಂತಾದವನ್ನು ಸಮರ್ಥವಾಗಿ ನಿಭಾಯಿಸುತ್ತದೆ. ಇದರಿಂದ ರಚನಾತ್ಮಕ ದೃಷ್ಟಿಯಿಂದ ಈ ಏಕಕೋಶ ಬಹುಕೋಶಜೀವಿಗಳ ಒಂದು ಕೋಶಕ್ಕೆ ಸಮ ಎಂದು ತಿಳಿಯಬಹುದಾದರೂ ಕ್ರಿಯಾತ್ಮಕ ದೃಷ್ಟಿಯಿಂದ ಒಂದು ಸಂಪೂರ್ಣ ಜೀವಿಯೇ ಆಗಿದೆ ಎನ್ನಬಹುದು. ಕೆಲವು ಸದಸ್ಯಗಳಲ್ಲಂತೂ ಈ ಒಂದೇ ಕೋಶದಲ್ಲಿ ವಿಭಿನ್ನ ಕಾರ್ಯಗಳಿಗೆ ಮೀಸಲಾದ ವಿಶೇಷೀಕೃತ ಅಂಗಕಗಳು (ಆರ್ಗನೆಲ್ಸ್-ಕೋಶ ಅಂಗಗಳು ಇದ್ದು ಕೋಶ ಅಂಗಗಳು) ಸಂಕೀರ್ಣಬಗೆಯದ್ದಾಗಿರುವುದು. ಈ ಅಂಗಕಗಳು ಸಮಾನವಾಗಿರುವುವು. ಇದರಿಂದಾಗಿ ಪ್ರೋಟೋeóÉೂೀವ ಗುಂಪಿನ ಪ್ರಾಣಿಗಳನ್ನು ಕೆಲವರು ಏಕಕೋಶ ಜೀವಿಗಳಿಂದ (ಫಾನ್ ಸೀಬೋಲ್ಡ್, 1845) ಕರೆದರೆ ಇನ್ನು ಕೆಲವರು (ಡೊಬೆಲ್, 1911) ಅಜೀವಕೋಶ ಜೀವಿಗಳು (ಏಸೆಲ್ಯುಲಾರ್) ಎಂದು ಕರೆದಿದ್ದಾರೆ.

ಈ ಗುಂಪಿನಲ್ಲಿ 30,000ಕ್ಕೂ ಹೆಚ್ಚು ಬಗೆಯ ಪ್ರಾಣಿಗಳಿವೆ. ಎಲ್ಲವೂ ಅತಿ ಸೂಕ್ಷ್ಮಜೀವಿಗಳು. ಇವು ಪ್ರಧಾನವಾಗಿ ಜಲವಾಸಿಗಳು. ಕೆಲವು ಸಿಹಿನೀರಿನ ಕೆರೆಕಟ್ಟೆಗಳಲ್ಲೊ ಚರಂಡಿ ಮುಂತಾದ ಕೊಳಚೆ ನೀರಿನ ತಾಣಗಳಲ್ಲೊ ವಾಸಿಸುವುವು. ತೇವಪೂರಿತ ಮಣ್ಣು, ಕೊಳೆಯುತ್ತಿರುವ ಸಾವಯವ ವಸ್ತುಗಳು ಮುಂತಾದೆಡೆಗಳಲ್ಲೂ ಕೆಲವು ಕಾಣದೊರೆಯುತ್ತದೆ. ಹಲಕೆಲವು ಬಗೆಗಳು ಸ್ವತಂತ್ರವಾದ ಈಜುಜೀವನ ನಡೆಸಿದರೆ ಇನ್ನು ಕೆಲವು ಯಾವುದಾದರೂ ಆಸರೆಗೆ ಅಂಟಿಕೊಂಡು ಸ್ಥಾವರಜೀವಿಗಳಾಗಿ ಬದುಕುವುವು. 
ಒಂಟೊಂಟಿಯಾಗಿರುವಂಥವು ಕೆಲವಿದ್ದರೆ ನಿವಹಗಳನ್ನು ರೂಪಿಸಿ ಕೊಂಡು ಸಮೂಹ ಜೀವನ ನಡೆಸುವಂಥವು ಮತ್ತೆ ಕೆಲವು. ಇವುಗಳ ಆಹಾರ ಸೇವನೆಯಲ್ಲೂ ವೈವಿಧ್ಯವುಂಟು. ಬಹುಪಾಲು ಬಗೆಗಳು ತಮ್ಮ ಆಹಾರವನ್ನು ಸಸ್ಯಗಳೋಪಾದಿಯಲ್ಲಿ ತಾವೇ ತಯಾರಿಸಿಕೊಳ್ಳಬಲ್ಲವಾದರೆ (ಹಾಲೊಫೈಟಿಕ್), ಕೆಲವು ಪ್ರಭೇದಗಳು ಇತರ ಸೂಕ್ಷ್ಮಪ್ರಾಣಿಗಳನ್ನು ಕಬಳಿಸಿ ಬದುಕುವುವು. (ಹಾಲೊಜûೂಯಿಕ್). ಇನ್ನೂ ಕೆಲವು ಬಗೆಗಳು ಸಸ್ಯ, ಪ್ರಾಣಿಗಳನ್ನು (ಮಾನವನೂ ಸೇರಿದಂತೆ), ಆಶ್ರಯಿಸಿಕೊಂಡಿರುವುವು. ಈ ಆಶ್ರಯ ಕೇವಲ ತಾತ್ಕಾಲಿಕವಾಗಿರಬಹುದು ಇಲ್ಲವೆ ಸಂಪೂರ್ಣ ಪರಾವಲಂಬನೆಯಾಗಿರಬಹುದು. ಅಲ್ಲದೆ ಕೆಲವು ತೆರನ ಬ್ಯಾಕ್ಟೀರಿಯಗಳಿಗೆ ಪ್ರೋಟೋeóÉೂೀವದ ಪ್ರಾಣಿಗಳೇ ಆಶ್ರಯದಾತಗಳಾಗಿರುವುದೂ ಉಂಟು. ಬೇರೆ ತೆರನ ಪ್ರಾಣಿಗಳಿಗೆ (ಮುಖ್ಯವಾಗಿ ಸಾಗರವಾಸಿ ಜಲಚರಿಗಳಿಗೆ) ಇವು ಆಹಾರವೂ ಹೌದು. ಕೆಲವು ಪ್ರಭೇದಗಳು ಕೊಳಚೆ ಗುಂಡಿಗಳ ನೀರನ್ನು ಶುದ್ದೀಕರಿಸಿ ಉಪಕಾರಿಗಳೆನಿಸಿಕೊಂಡಿದ್ದರೆ ಇನ್ನಲವು ಸಾಕು ಪ್ರಾಣಿಗಳಲ್ಲಿ ಹಾಗೂ ಮಾನವರಲ್ಲಿ ಪರಾವಲಂಬಿಗಳಾಗಿದ್ದು ಕೊಂಡಿದ್ದು ಹಲವಾರು ತೆರನ ರೋಗಗಳನ್ನು ಉಂಟುಮಾಡುತ್ತವೆ. ಉದಾಹರಣೆಗೆ ಆಮಶಂಕೆಯನ್ನುಂಟುಮಾಡುವ ಎಂಟಮೀಬ, ಮಲೇರಿಯ ಕಾರಕ ಪ್ಲಾಸ್ಮೋಡಿಯಮ್, ನಿದ್ರಾರೋಗಜನಕ ಟ್ರಿಪ್ಯಾನೊಸೋಮ ಇತ್ಯಾದಿ.
ಪ್ರೋಟೋeóÉೂೀವದ ಪ್ರಾಣಿಗಳು ಅತಿಸೂಕ್ಷ್ಮಗಾತ್ರದವು ಎಂದು ಹೇಳಿದೆ. ಇವು ಸಾಮಾನ್ಯವಾಗಿ ಏಕಕೋಶಜೀವಿಗಳು. ಕೆಲವು ಬಗೆಗಳು ಹಲವಾರು ಕೋಶಗಳಿಂದ ಕೂಡಿದ ನಿವಹ (ಕಾಲನಿ)ಗಳಾಗಿ ರೂಪುಗೊಂಡಿವೆ. ಕೋಶ ಸಮಮಿತಿ ದ್ವಿಪಾಶ್ರ್ವ ರೀತಿಯದ್ದಾಗಿರಬಹುದು ಇಲ್ಲವೆ ಆರೀಯ ಅಥವಾ ಗೋಲೀಯವಾಗಿರಬಹುದು.
ಕೋಶದ ಆಕಾರ ಅಂಡದಂತೆ, ಉದ್ದುದ್ದ ಇಲ್ಲವೆ ಗೋಳದಂತೆ. ಕೋಶದ ಒಳಗೆ ಒಂಟಿ ಅಥವಾ ಹಲವಾರು ನ್ಯೂಕ್ಲಿಯಸುಗಳುಂಟು.

ಸಂಚಲನಾಂಗಗಳು ಮಿಥ್ಯಾಪಾದ, ಲೋಮಾಂಗ ಇಲ್ಲವೆ ಕಶಾಂಗಗಳ ರೂಪದಲ್ಲಿ ಇರುತ್ತವೆ. ಪರಾವಲಂಬಿ ಜೀವಿಗಳಲ್ಲಿ ಚಲನಾಂಗಗಳೇ ಇಲ್ಲ. ಆಹಾರವನ್ನು ಜೀರ್ಣಿಸಲು ಮತ್ತು ಸೂಕ್ಷ್ಮಾಭಿಸರಣವನ್ನು ನಿಯಂತ್ರಿಸಲು ಮೀಸಲಾದ ಆಹಾರಾವಕಾಶ ಮತ್ತು ಸಂಕೋಚನಾವಕಾಶಗಳಿವೆ. ಕೆಲವು ಜೀವಿಗಳಲ್ಲಿ ಕೋಶದ ಸುತ್ತ ಪೆಲಿಕಲ್ ಎಂಬ ಸರಳ ರಕ್ಷಣಾ ಹೊದಿಕೆ ಉಂಟು. ಕೆಲವೊಮ್ಮೆ ಕೋಶ ಬೆತ್ತಲೆಯಾಗಿರಬಹುದು. ಇನ್ನು ಕೆಲವಲ್ಲಿ ಕೋಶ ಸುಂದರ ಅಲಂಕರಣಗಳಿರುವ ಚಿಪ್ಪುಗಳಿಂದ, ಕವಚಗಳಿಂದ ಆವೃತವಾಗಿರುತ್ತದೆ. ಇಂಥ ಅಲಂಕರಣಗಳ ಕವಚ ದೇಹದ ಒಳಗೂ ಇರಬಹುದು.

ಕೋಶದ್ರವ್ಯ ಏಕ್ಟೋಪ್ಲಾಸಮ್ ಎಂಬ ವರ್ಣರಹಿತ ಬಾಹ್ಯಭಾಗವನ್ನೂ ಎಂಡೊಪ್ಲಾಸಮ್ ಎಂಬ ವರ್ಣಮಯ ಒಳಭಾಗವನ್ನೂ ಒಳಗೊಂಡಿದೆ.
ಎಕ್ಟೋಪ್ಲಾಸಮಿನಿಂದ ರೂಪಿತಗೊಂಡಿರುವಂಥ ಸಂಚಲನಾಂಗಗಳಲ್ಲಿ ಮಿಥ್ಯಾಪಾದಗಳು ತಾತ್ಕಾಲಿಕವಾಗಿ ಕಾಣಿಸಿಕೊಳ್ಳುವಂತಾದರೆ, ಲೋಮಾಂಗ ಮತ್ತು ಕಶಾಂಗಗಳು ಶಾತ್ವತ ಬಗೆಯವು. ಈ ಸಂಚಲನಾಂಗಗಳ ರಚನೆ ಮತ್ತು ನಿಯಂತ್ರಣ ಬಲು ಜಟಿಲರೀತಿಯದು.

ಸಂತಾನೋತ್ಪತ್ತಿಗೆ ಮುಖ್ಯ ಕಾರಣವಾದ ನ್ಯೂಕ್ಲಿಯಸ್ ಸಂಚಿರೂಪ, ದುಂಡು, ಅಂಡಕಾರ, ಉದ್ದನಾದ, ಮಣಿಸರ, ಹುರುಳಿ ಹಾಗೂ ಕವಲೊಡೆದ ಆಕಾರ. ತಳೆದು ವಿವಿಧ ಪ್ರಾಣಿಗಳಲ್ಲಿ ಕಾಣಬರುತ್ತದೆ. ಆಕಾರದಲ್ಲಿ ಮಾತ್ರವಲ್ಲದೆ ಸಂಖ್ಯೆಯಲ್ಲಿಯೂ ನ್ಯೂಕ್ಲಿಯಸ್ ವ್ಯತ್ಯಾಸ ತೋರುತ್ತದೆ. ಕೆಲವು ಪ್ರಾಣಿಗಳಲ್ಲಿ ಒಂದು ನ್ಯೂಕ್ಲಿಯಸ್ ಮಾತ್ರ ಕಂಡುಬಂದರೆ, ಇನ್ನು ಕೆಲವು ಪ್ರಾಣಿಗಳಲ್ಲಿ ಸಾಮಾನ್ಯವಾಗಿ ಎರಡು ಅಥವಾ ಅದಕ್ಕಿಂತ ಹೆಚ್ಚು ನ್ಯೂಕ್ಲಿಯಸುಗಳಿವೆ. ಎರಡು ನ್ಯೂಕ್ಲಿಯಸುಗಳಿದ್ದರೆ ಇವುಗಳಲ್ಲಿ ಒಂದು ಚಿಕ್ಕದಾಗಿದ್ದು ಇದನ್ನು ಮೈಕ್ರೊನ್ಯೂಕ್ಲಿಯಸ್ ಎಂದು ಇನ್ನೊಂದು ಸ್ವಲ್ಪ ದೊಡ್ಡದಾಗಿದ್ದು ಇದನ್ನು ಮ್ಯಾಕ್ರೊನ್ಯೂಕ್ಲಿಯಸ್ ಎಂದು ಹೆಸರಿಸಲಾಗಿದೆ.

ಸಂತಾನೋತ್ಪತ್ತಿಯಲ್ಲಿ ಲಿಂಗರೀತಿ ಮತ್ತು ನಿರ್ಲಿಂಗ ರೀತಿಗಳೆರಡೂ ಕಂಡು ಬರುತ್ತದೆ. ಖಂಡನ (ಫಿಶನ್) ಮತ್ತು ಅಂಕುರಣಗಳು (ಬಡಿಂಗ್) ನಿರ್ಲಿಂಗ ರೀತಿಯ ವಿಧಾನಗಳು. ಖಂಡನ ರೀತಿಯಲ್ಲಿ ದ್ವಿಖಂಡನ (ಬೈನರಿ ಫಿಶನ್) ಮತ್ತು ಬಹುಖಂಡನಕ್ರಮಗಳು (ಮಲ್ಟಿಪಲ್‍ಫಿಶನ್) ಉಂಟು. ಲಿಂಗರೀತಿಯಲ್ಲಿ ಎಲ್ಲ ಹಂತದ ಲಿಂಗಾಣುಗಳನ್ನೂ ಕಾಣಬಹುದು. ಕೆಲವು ಪ್ರೋಟೋeóÉೂೀವಗಳು ಲಿಂಗರೀತಿ ಮತ್ತು ನಿರ್ಲಿಂಗ ರೀತಿ ಸಂತಾನೋತ್ವತ್ತಿ ಎರಡೂ ಇರುವಂಥ ಜೀವನ ಚರಿತ್ರೆಯನ್ನು ಪಡೆದಿವೆ. ಲಿಂಗಾಣುಗಳ ಕೂಡುವಿಕೆಯೇ ಗರ್ಭಾಂಕುರತೆ. ಲಿಂಗಾಣುಗಳು ಸಂಧಿಸಿ ತಮ್ಮ ನ್ಯೂಕ್ಲಿಯರ್ ಭಾಗಗಳನ್ನು ಮಾತ್ರ ವಿನಿಮಯ ಮಾಡಿ ಕೊಂಡು ಬೇರ್ಪಡುವ ಅನುಬದ್ಧಸಂಯೋಗ (ಕಾಂಜುಗೇಷನ್) ಎಂಬ ಇನ್ನೊಂದು ವಿಶೇಷ ರೀತಿಯ ಸಂತಾನೋತ್ಪತ್ತಿ ಕ್ರಮವೂ ಉಂಟು. ಅನುಬದ್ಧ ಸಂಯೋಗ ಪ್ಯಾರಮೀಸಿಯಮಿನಲ್ಲಿ ಮಾತ್ರ ಕಂಡುಬರುತ್ತದೆ. ಉಳಿದ ಪ್ರೋಟೋeóÉೂೀವ ಪ್ರಾಣಿಗಳಲ್ಲಿ ಇದರ ಸುಳಿವೇ ಇಲ್ಲ.

ಅಮೀಬದ ಸಂತಾನೋತ್ಪತ್ತಿ ಒಂದು ಕೋಶ ಎರಡಾಗಿ ಸೀಳುವುದರಿಂದ ನಡೆಯುತ್ತ ಮುಂದುವರೆಯುತ್ತದೆ. ಅದಕ್ಕೆ ಕೊನೆಯೇ ಇಲ್ಲ. ಹೀಗೆ ಸಂತಾನೋತ್ವತ್ತಿ ಯಾವ ಅಡಚಣೆ ಇಲ್ಲದೇ ಸರಾಗವಾಗಿ ಸಾಗುತ್ತ, ಅವುಗಳ ಸಂಖ್ಯೆ ವೃದ್ಧಿಗೊಳ್ಳುತ್ತ ಬರುವುದು.

ಪ್ರೋಟೋeóÉೂೀವ ವಂಶಕ್ಕೆ ಸೇರಿದ ಕೆಲವು ಪ್ರಾಣಿಗಳ ಹೊರಮೈ ಸುಣ್ಣದ ಕವಚದಿಂದ ಅವೃತವಾಗಿದ್ದು, ರಂಧ್ರಮಯವಾಗಿದೆ. ಇನ್ನು ಕೆಲವು ಕಿರಣಕಾಯವನ್ನು ಹೊಂದಿರುವ ಪ್ರಾಣಿಗಳಾಗಿವೆ. ಇವೇ ರೇಡಿಯೋಲೇರಿಯಗಳು. ಸಿಲಿಕ ವಸ್ತುವಿನಿಂದ ಇವು ತಮ್ಮ ಕವಚ ನಿರ್ಮಿಸುತ್ತ. ಅದರ ಒಳಭಾಗದಲ್ಲಿ ವಾಸಿಸುತ್ತವೆ. ಈ ಕವಚಗಳು, ಜೀವಿ ಸತ್ತಮೇಲೆ ನೆಲವನ್ನು ಸೇರಿ ಸಂಗ್ರಹಗೊಳ್ಳುವುವು. ಇಂಥ ಕವಚಗಳು ಗಟ್ಟಿಯಾಗಿರುವುದರಿಂದ ಪಳೆಯುಳಿಕೆಗಳ ರೂಪದಲ್ಲಿ ನಮಗೆ ಸಿಗುವುವು, ಶಾಂತಸಾಗರ, ಹಿಂದೂಸಾಗರಗಳೆರಡರಲ್ಲೂ ಸುಮಾರು ಮೂರು ಮಿಲಿಯ ಚದರ ಮೈಲು ವಿಸ್ತೀರ್ಣದಲ್ಲಿ ಇಂಥ ಸಂಗ್ರಹವನ್ನು ಕಾಣಬಹುದು.

ಪ್ರೋಟೋeóÉೂೀವದಲ್ಲಿ ಕಂಡುಬರುವ ವಿವಿಧ ಸಂಚಲನಾಂಗಗಳ ಆಧಾರದ ಮೇಲೆ ಹಾಗೂ ದೇಹದ ಆಕಾರದ ಆಧಾರದ ಮೇಲೆ ಈ ವಂಶವನ್ನು ನಾಲ್ಕುವರ್ಗಗಳಾಗಿ ವಿಂಗಡಿಸಲಾಗಿದೆ.

ವರ್ಗ 1 ರೈeóÁಪೂಡ : ಈ ವರ್ಗಕ್ಕೆ ಸೇರಿದ ಪ್ರಾಣಿಗಳು ಮಿಥ್ಯಾಪಾದಗಳ ಸಹಾಯದಿಂದ ಒಂದು ಕಡೆಯಿಂದ ಮತ್ತೊಂದು ಕಡೆಗೆ ಮಂದಗಾಮಿಗಳಾಗಿ ತೆವಳುತ್ತವೆ. ಅಷ್ಟೇ ಅಲ್ಲದೆ ತಮ್ಮ ಆಹಾರವನ್ನು ದೊರಕಿಸಿಕೊಳ್ಳುವುದಕ್ಕೂ ಮಿಥ್ಯಾಪಾದಗಳನ್ನೇ ಬಳಸಿಕೊಳ್ಳುತ್ತವೆ. ಇವು ಹೆಚ್ಚಾಗಿ ಸಮುದ್ರವಾಸಿಗಳು, ಕೆಲವು ಪರತಂತ್ರ ಜೀವಿಗಳೂ ಇವೆ.
ಈ ವರ್ಗಕ್ಕೆ ಸೇರಿದ ಫೊರ್ಯಾಮಿನಿಫೆರ ಗಣದ ಕೆಲವು ಜೀವಿಗಳ ಮೈಯಲ್ಲಿ ರಂಧ್ರಗಳು ಇರುವುದನ್ನು ಗಮನಿಸಬಹುದು. ಈ ಸೂಕ್ಷ್ಮ ಜೀವಿಯ ಹೊರಮೈ ಒಂದು ಬಗಗೆಯ ಚಿಪ್ಪಿನದು ; ತೆಳ್ಳಗಿನ ಸುಣ್ಣದ ಕವಚ.

ಅಮೀಬ ಈ ಗುಂಪಿನ ಮುಖ್ಯ ಉದಾಹರಣೆ, ಇದು ಸಿಹಿನೀರಿನಲ್ಲಿ, ಹಳ್ಳಗಳಲ್ಲಿ ಕೊಚ್ಚೆಗುಂಡಿಗಳಲ್ಲಿ ವಾಸಿಸುತ್ತದೆ. ಸೂಕ್ಷ್ಮದರ್ಶಕದ ಸಹಾಯದಿಂದ ಮಾತ್ರ ನೋಡಬಹುದು. ಮಿಥ್ಯಾಪಾದಗಳ ಸಹಾಯದಿಂದ ಒಂದು ಕಡೆಯಿಂದ ಇನ್ನೊಂದು ಕಡೆಗೆ ಮಂದಗಾಮಿಯಾಗಿ ತೆವಳುತ್ತದೆ. ಆಹಾರವನ್ನು ದೊರಕಿಸಿಕೊಳ್ಳುವುದೂ ಮಿಥ್ಯಾಪಾದಗಳಿಂದಲೇ. ಇದು ಸ್ಬತಂತ್ರ ಜೀವಿ.

ಎಂಟಮೀಬ ಹಿಸ್ಟೊಲಿಟಿಕ ಎಂಬುದು ಇನ್ನೊಂದು ಉದಾಹರಣೆ, ಇದು ರೋಗಕಾರಕ ಪರತಂತ್ರ ಜೀವಿಯಾಗಿ ಮನುಷ್ಯನ ಕರುಳಿನ ಕೋಲನ್ ಭಾಗದಲ್ಲಿ ಸೇರಿಕೊಂಡಿರುತ್ತದೆ. ಉಷ್ಣಪ್ರದೇಶಗಳಲ್ಲಿ ಇದರ ಹಾವಳಿ ಹೆಚ್ಚು. ಅಮೀಬೀಯ ಆಮಶಂಕೆ ಎಂಬ ರೋಗ ಉಂಟಾಗುವುದು ಇದರಿಂದಲೇ. ಮನುಷ್ಯನ ಕರುಳಿನ ಶ್ಲೇಷ್ಮ ಪಟಲದಲ್ಲಿ ವಾಸಿಸುವ ಇದು ಕಿಣ್ವಗಳನ್ನು ಉತ್ಪತ್ತಿ ಮಾಡಿ ಅಲ್ಲಿರುವ ಅನುಲೇಪಕ ಜೀವಕೋಶಗಳನ್ನು ಕರಗಿಸುತ್ತದೆ. ಪರಿಣಾಮವಾಗಿ ಅಲ್ಲಿ ವ್ರಣಗಳಾಗುತ್ತವೆ. ಹೀಗೆ ಅಂಗಾಂಶಗಳನ್ನು ಕರಗಿಸುವ ಈ ಗುಣದಿಂದಾಗಿ ಈ ಪ್ರಭೇದಕ್ಕೆ ಹಿಸ್ಟುಲಿಟಿಕ ಎಂಬ ಹೆಸರು ಬಳಕೆಗೆ ಬಂದಿದೆ.

ಎಂಟಮೀಬಕ್ಕೆ ನಿರ್ದಿಷ್ಟ ಆಕಾರ ಇಲ್ಲ. ಇದು ಸು. 0.05_0.06 ಮಿಮೀ ಗಾತ್ರದ ಪ್ರಾಣಿ. ಕೋಶದ್ರವ್ಯದಲ್ಲಿ ಹೊರಗಿನ ಸ್ಪಷ್ಟವಾದ, ಪಾರದರ್ಶಕವಾದ ಎಕ್ಟೋಪ್ಲಾಸಮ್ ಮತ್ತು ಒಳಗಿನ ಕಣಪೂರಿತ ಎಂಡೋ ಪ್ಲಾಸಮ್ ಎಂಬ ಎರಡು ಭಾಗಗಳುಂಟು. ದುಂಡಗಿರುವ ಒಂದು ನ್ಯೂಕ್ಲಿಯಸ್ಸು ಎಂಡೋಪ್ಲಾಸಮಿನಲ್ಲಿದ್ದು ಅದರ ಸುತ್ತ ತೆಳುವಾದ ನ್ಯೂಕ್ಲಿಯಸ್ ಪಟಲವಿದೆ. ಒಳಗೆ ಮಣಿಯಾಕಾರದ ಕ್ರೊನ್ಯೂಟಿನ್ ಕಣಗಳಿವೆ. ಎಂಡೊಪ್ಲಾಸಮ್ ಭಾಗದಲ್ಲಿ ಆಹಾರಾವಕಾಶಗಳೂ ಇವೆ. ಇವುಗಳಲ್ಲಿ ಪ್ರಾಣಿ ನುಂಗಿದ ಆಹಾರ ಇರುತ್ತವೆ. ಎಂಟಮೀಬ ಪರತಂತ್ರ ಜೀವಿಯಾದ್ದರಿಂದ ಇದರಲ್ಲಿ ಸಂಕೋಚನಾವಕಾಶಗಳಿಲ್ಲ. ಇದರಲ್ಲಿ ಸಾಮಾನ್ಯವಾಗಿ ಒಂದು ಅಥವಾ ಎರಡು ಮೊಂಡು ಮಿಥ್ಯಾಪಾದಗಳು ಉಂಟು. ಉಸಿರಾಟಕ್ಕೆ ಯಾವ ವಿಶೇಷ ರಚನೆಯೂ ಇಲ್ಲ. ಆದರೆ ವಿಸರಣ ನಿಯಮದ ಅನುಸಾರ ಸುತ್ತಲ ಪರಿಸರದಿಂದ ಆಕ್ಸಿಜನ್ನನ್ನು ಪಡೆದು ಕಾರ್ಬನ್ ಡೈ ಆಕ್ಸೈಡನ್ನು ವಿಸರ್ಜಿಸುತ್ತದೆ.
ಇದರ ಸಂತಾನೋತ್ಪತ್ತಿ ದ್ವಿಖಂಡನ ರೀತಿಯದು. ಪರಿಸ್ಥಿತಿ ಅನುಕೂಲವಾಗಿದ್ದು ಪ್ರಾಣಿಯೂ ಒಂದು ನಿರ್ದಿಷ್ಟಗಾತ್ರಕ್ಕೆ ಬೆಳೆದಾಗ ದ್ವಿಖಂಡನ ನಡೆಯುತ್ತದೆ. ಮೊದಲು ನ್ಯೂಕ್ಲಿಯಸ್ ವಿಭಾಗವಾಗಿ ದೇಹದ ಕೋಶದ್ರವ್ಯ ಸೀಳಿ ಒಂದೊಂದು ನ್ಯೂಕ್ಲಿಯಸ್‍ಗಳಿರುವ ಎರಡು ಮರಿಗಳಾಗುತ್ತವೆ.

ವರ್ಗ 2 ಪ್ಲಾಜೆಲ್ಲೇಟ : ಈ ವರ್ಗಕ್ಕೆ ಸೇರಿದ ಪ್ರಾಣಿಗಳ ಸಂಚಲನಾಂಗಗಳು ಕಂಶಾಗಗಳು. ಪ್ರಾಣಿಗಳು ಸಾಮಾನ್ಯವಾಗಿ ತೀವ್ರಗಾಮಿಗಳು. ಸಮುದ್ರದಲ್ಲಿ ಹಳ್ಳ ಕೊಳ್ಳಗಳಲ್ಲಿ ಮತ್ತು ನಿಂತನೀರಿನಲ್ಲಿ ವಾಸಿಸುತ್ತವೆ. ಉಷ್ಣವಲಯದ ಪ್ರದೇಶಗಳಲ್ಲಿ ವಾಸಿಸುವ ಮಾನವ ಮತ್ತು ಪ್ರಾಣಿಗಳ ರಕ್ತದಲ್ಲಿ ಅತ್ಯಂತ ಮಾರಕವಾದ ಪರತಂತ್ರಜೀವಿಗಳಾಗಿ ವಾಸಿಸುವ ಜೀವಿಗಳೂ ಈ ಗುಂಪಿಗೆ ಸೇರಿವೆ.

ಉದಾಹರಣೆ : ಯೂಗ್ಲೀನ. ಇದು ಸಿಹಿನೀರಿನಲ್ಲಿ ವಾಸಿಸುವ ಸ್ವತಂತ್ರ ಜೀವಿ. ನೀರು ನಿಂತು ಕೊಳೆಯುತ್ತಿರುವಂಥ ಸ್ಥಳಗಳಲ್ಲಿ ಹೆಚ್ಚಾಗಿ ಕಾಣಬರುತ್ತದೆ. ಇದರ ಗಾತ್ರ 1ಮಿಮೀ. ಕೋಶದ್ರವ್ಯ ಎಂಟಮೀಬದಲ್ಲಿಯಂತೆ ಎಕ್ಟೋಪ್ಲಾಸಮ್ ಮತ್ತು ಎಂಡೋಪ್ಲಾಸಮ್ ಎಂದು ವಿಭೇದೀಕೃತವಾಗಿದೆ. ಹೊರಗಿನ ಎಕ್ಟೋಪ್ಲಾಸ್‍ಮಿನ ಸ್ವಲ್ಪ ಭಾಗ ಪೆಲಿಕಲ್ ಆಗಿ ದೇಹವನ್ನು ಅವರಿಸಿದೆ.

ಪ್ರಾಣಿಯ ದೇಹದ ಮುಂದಿನ ತುದಿಯಲ್ಲಿ ತಗ್ಗಾದ ಪ್ರದೇಶವಿದ್ದು. ಹಿಂದಕ್ಕೆ ನಾಳರೂಪದಲ್ಲಿ ಚಾಚಿದೆ. ಇದೇ ಫ್ಯಾರಿಂಕ್ಸ್ (ಗಂಟಲು). ಇದು ಸ್ವಲ್ಪ ಹಿಂದೆ ಹಿಗ್ಗಿ ಅಗಲವಾದ ಆಶ್ರಯವಾಗಿದೆ. ಗಂಟಲಿನಿಂದ ಉದ್ದವಾದ ಚಾಟಿಯಂತಿರುವ ಕಶಾಂಗವೊಂದು ಚಾಚಿಕೊಂಡಿದೆ. ಕಶಾಂಗಕ್ಕೆ ಸಂಕುಚನ ಸಾಮಥ್ರ್ಯ ಉಂಟು. ಆಶ್ರಯದ ಸನಿಯದಲ್ಲಿಯೇ ಒಂದು ದೊಡ್ಡ ಸಂಕೋಚನಾವಕಾಶವಿದೆ ; ಹಾಗೂ ಇದರ ಸುತ್ತಲೂ ಕೆಲವು ಚಿಕ್ಕ ಚಿಕ್ಕ ಸಂಕೋಚನಾವಕಾಶಗಳಿವೆ. ಕಶಾಂಗದ ಚಲನೆಯಿಂದಾಗಿ ಯೂಗ್ಲೀನ ಸಂಚರಿಸುತ್ತದೆ.
ಸಸ್ಯಗಳಂತೆ, ತನ್ನ ಆಹಾರವನ್ನು ತಾನೇ ತಯಾರಿಸಿಕೊಳ್ಳಬಲ್ಲ ಹಾಲೊಫೈಟಿಕ್ ಕ್ರಮವನ್ನು ಯೂಗ್ಲೀನ ಅನುಸರಿಸುತ್ತದೆ. ಯೂಗ್ಲೀನದಲ್ಲಿ ನಿರ್ಲಿಂಗರೀತಿಯ ದ್ವಿಖಂಡನ ವಿಧಾನದಲ್ಲಿ ಸಂತಾನೋತ್ಪತ್ತಿ ನಡೆಯುತ್ತಿದೆ. ಈ ವರ್ಗಕ್ಕೆ ಸೇರಿದ ಇನ್ನೊಂದು ಮುಖ್ಯ ಉದಾಹರಣೆ ಟ್ರಿಪ್ಯಾನೊಸೋಮ ಗ್ಯಾಂಬಿಯೆನ್ಸಿ. ಇದು ಪರತಂತ್ರ ಜೀವಿ. ಮನುಷ್ಯನ ರಕ್ತದಲ್ಲಿ ವಾಸಿಸುತ್ತದೆ. ಆಫ್ರಿಕದಲ್ಲಿ ಇದರ ಹಾವಳಿ ಹೆಚ್ಚು. ನಿದ್ರಾವಾತರೋಗ ಅಥವಾ ಗ್ಯಾಂಬಿಯಜ್ವರ ಎಂಬ ರೋಗವನ್ನು ಇದು ಉಂಟುಮಾಡುತ್ತದೆ.

ವರ್ಗ 3 ಸ್ಪೋರೋeóÉೂೀವ : ಈ ವರ್ಗಕ್ಕೆ ಸೇರಿದ ಪ್ರಾಣಿಗಳಲ್ಲಿ ಯಾವುದೇ ವಿಶಿಷ್ಟ ಬಗೆಯ ಚಲನಾಂಗಗಳಿಲ್ಲ. ಇವು ನಿವಹಗಳ ರೂಪದ ಜೀವಿಗಳು. ಬಹುವಾಗಿ ಪರಾವಲಂಬಿಗಳು ; ಆತಿಥೇಯಗಳ ದೇಹದಲ್ಲಿ ಸೇರಿಕೊಂಡು, ಸಾಮಾನ್ಯ ದೈಹಿಕ ಕ್ರಿಯೆಗಳಿಗೆ ಅಡ್ಡಿ ಆತಂಕಗಳನ್ನು ಒಡ್ಡುವುದರ ಮೂಲಕ ರೋಗರುಜಿನಗಳನ್ನು ಉಂಟುಮಾಡುತ್ತವೆ. ಉದಾಹರಣೆಗೆ ಮಲೇರಿಯವನ್ನು ಉಂಟುಮಾಡುವ ಪ್ಲಾಸೋಡಿಯಮ್. ಇದು ಮಾನವನ ಕೆಂಪು ರಕ್ತ ಕಣಗಳಲ್ಲಿ ಜೀವಿಸುತ್ತದೆ. ತನ್ನ ಜೀವನ ಚಕ್ರದ ಕೆಲವು ಹಂತಗಳನ್ನು ಮಾನವನ ಕೆಂಪು ರಕ್ತ ಕಣಗಳಲ್ಲೂ ಉಳಿದ ಹಂತಗಳನ್ನು ಹೆಣ್ಣು ಅನಾಫಿಲಿಸ್ ಸೊಳ್ಳೆಯ ಜೀರ್ಣಾಂಗಗಳಲ್ಲಿಯೂ ಕಳೆಯುತ್ತದೆ.

ವರ್ಗ 4 ಸಿಲಿಯೇಟ : ಪ್ರೋಟೋeóÉೂೀವ ವಂಶದ ಕೊನೆಯ ವರ್ಗ. ಈ ವರ್ಗದ ಪ್ರಾಣಿಗಳ ಚಲನಾಂಗಗಳು ಲೋಮಾಂಗಗಳು. ಕೋಶದೇಹದಲ್ಲಿ ಎರಡು ಅಥವಾ ಹೆಚ್ಚು ನ್ಯೂಕ್ಲಿಯಸುಗಳುಂಟು. ಲೋಮಾಂಗಗಳು ಪ್ರಾಣಿಯ ದೇಹದ ಮೇಲೆಲ್ಲ ಹರಡಿಕೊಂಡು ಅತಿ ಸೂಕ್ಷ್ಮಗಾತ್ರದ ರೋಮಗಳಂತೆ ಕಾಣುತ್ತವೆ. ಈ ವರ್ಗದಪ್ರಾಣಿಗಳು ಕೆರೆ, ಕೊಳ ಹಾಗೂ ಸಮುದ್ರಗಳಲ್ಲಿ ವಾಸಿಸುವುವು. ಈ ವರ್ಗಕ್ಕೆ ಸೇರಿದ ಕೆಲವು ಜೀವಿಗಳು ಪರತಂತ್ರ ಜೀವನವನ್ನು ನಡೆಸುತ್ತವೆ. ಉದಾ : ಓಪಲೈನ. ಇದು ಕಪ್ಪೆಯ ಹೊಟ್ಟೆಯಲ್ಲಿ ವಾಸಿಸುತ್ತದೆ. ಸ್ಪೋರೋeóÉೂೀವದ ಇನ್ನೊಂದು ಉದಾಹರಣೆ ಪ್ಯಾರಮೀಸಿಯಮ್. ಇದು ಸ್ವತಂತ್ರ ಜೀವಿ. ಇದರ ಕೋಶದ ದ್ರವ್ಯದಲ್ಲಿ ಎಂಡೋಪ್ಲಾಸಮಿನ ನಡುಭಾಗದಲ್ಲಿ ಎರಡು ನ್ಯೂಕ್ಲಿಯಸುಗಳಿವೆ. ಒಂದು ದೊಡ್ಡ ಗಾತ್ರದ ಹಾಗೂ ಹುರುಳಿಯಾಕಾರದ ಮ್ಯಾಕ್ರೊನ್ಯೂಕ್ಲಿಯಸ್. ಇನ್ನೊಂದು ಗಾತ್ರದಲ್ಲಿ ಚಿಕ್ಕದಾದ ಮೈಕ್ರೊನ್ಯೂಕ್ಲಿಯಸ್. ಮ್ಯಾಕ್ರೊನ್ಯೂಕ್ಲಿಯಸ್ ದೈನಂದಿನ ಚಯಾಪಚಯ ಕ್ರಿಯೆಗಳನ್ನು ನಿಯಂತ್ರಿಸುತ್ತದಾದರೆ ಮೈಕ್ರೊನ್ಯೂಕ್ಲಿಯಸ್ ಸಂತಾನೋತ್ಪತ್ತಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಪ್ಯಾರಮೀಸಿಯಮ್ ಚಲಿಸುವುದು ಲೋಮಾಂಗಗಳ ಸಹಾಯದಿಂದ ಇದರ ಆಹಾರ ಸೇವನೆಯ ಕ್ರಮ ಹಾಲೋeóÉೂೀಯಿಕ್ ರೀತಿಯದು. ಇದರಲ್ಲಿ ಲಿಂಗರೀತಿಯ ಮತ್ತು ನಿರ್ಲಿಂಗರೀತಿಯ ಸಂತಾನೋತ್ಪತ್ತಿಗಳೆರಡೂ ಉಂಟು. 
(ನೋಡಿ- ಪ್ಯಾರಮೀಸಿಯಮ್)	
(ಎಂ.ಎನ್.ವಿಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ